ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಚಿಣ್ಣರಿಂದ ವಿಜೃಂಭಣೆಯ ಪವಿತ್ರ ಪರಮ ಪ್ರಸಾದ ಸ್ವೀಕರಣೆ

|

ನೆಲ್ಯಾಡಿ :ನೆಲ್ಯಾಡಿ ಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ದಿವ್ಯ ಬಾಲರ ವಿಜೃಂಭಣೆಯ ಪವಿತ್ರ ಪರಮ ಪ್ರಸಾದ ಸ್ವೀಕರಣಾ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ಜರುಗಿತು.ಹತ್ತು ಮಕ್ಕಳು ಹತ್ತು ದಿನಗಳಿಂದ ಪ್ರಾರ್ಥನೆ ಮತ್ತು ತರಬೇತಿ ಯ ಮುಖಾಂತರ ಈ ಧಾರ್ಮಿಕ ವಿಧಿಗೆ ಸಿದ್ಧತೆ ಮಾಡಿ ಕೊಂಡಿದ್ದರು.ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು,ವಂದನಿಯ ಫಾ.ಆಗಸ್ಟಿನ್ ಪೊಟ್ಟಮ್ ಕುಳಂಗರ,ಕಂಕನಾಡಿ ವಂದನಿಯ ಫಾ.ಕುರಿಯಾಸ್, ಜಗದಲ್ಪುರ್,ವಂದನಿಯ ಫಾ.ಶಾಜನ್ ಎಂಬ್ರಾòಡಿ ವಯಲಿಲ್ ಮೈಸೂರ್, ವಂದನಿಯ ಫಾ.ಸೇಬಾಷ್ಟಿಯನ್ ಪುನ್ನತಾನಮ್ ಬೋಲ್ಮಿ ನಾರ್,ಕೊಕ್ಕಡದ ವಂದನಿಯ ಫಾ.ಜಿಬಿನ್ ವಂದನಿಯ ಫಾ ಅಲೆಕ್ಸ್ ಉಪಸ್ಥಿತರಿದ್ದರು. ವಂದನಿಯ ಸಿಸ್ಟರ್. ಎಲ್ ಸ್ಲಿಟ್,ವಂದನಿಯ ಸಿಸ್ಟರ್ ಆಲ್ಫಿ, ಶ್ರೀಮತಿ ಪ್ರಸ್ಟಿನ ರೊಯ್, ಶ್ರೀ ರೊಯ್ ಕೊಳòಗರಾತ್ತ್ ತರಬೇತಿ ನೀಡಿದರು.