ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ .) ವತಿಯಿಂದ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಗೆ ಸನ್ಮಾನ

|

ಪಾವೂರು ಉಳಿಯ ದ್ವೀಪದ ನಿವಾಸಿಗಳಿಗೆ ತೂಗು ಸೇತುವೆ ನಿರ್ಮಾಣ ಮಾಡುವಂತೆ ಕಳೆದ 18 ವರ್ಷಗಳಿಂದ ಸರಕಾರಕ್ಕೆ ನಿರಂತರವಾಗಿ ಮನವಿಗಳನ್ನು ನೀಡಿ ಒತ್ತಾಯವನ್ನು ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮಾಡುತ್ತಾ ಬಂದಿತ್ತು. ಇದರ ಫಲವಾಗಿ ಹಲವಾರು ವರ್ಷಗಳ ತೂಗು ಸೇತುವೆಯ ಕನಸನ್ನು 12 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ಕನಸನ್ನು ನನಸು ಮಾಡಿದ ಕರ್ನಾಟಕ ವಿಧಾನ ಸಭೆಯ ಸ್ಪೀಕ‌ರ್ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಕೇಂದ್ರೀಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀ‌ರ್ ನೇತೃತ್ವದಲ್ಲಿ ಮೇ 9ರಂದು ಶುಕ್ರವಾರ ಕೃತಜ್ಞತೆಯನ್ನು ಸಲ್ಲಿಸಿ ಸನ್ಮಾನವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ವಂದನೀಯ ಫಾದರ್ ಜೆರಾಲ್ಡ್ ಲೋಬೊ, ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ, ಕೇಂದ್ರೀಯ ಸಹ ಕಾರ್ಯದರ್ಶಿ ಲವೀನಾ ಡಿಸೋಜ, ಮಾಜಿ ಅಧ್ಯಕ್ಷ ರಾದ ಪಾವ್ಲ್ ರೊಲ್ಫಿ ಡಿಕೋಸ್ತಾ, ಕಾಸರಗೋಡು ವಲಯ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ, ಸಿಟಿ ವಲಯ ಅಧ್ಯಕ್ಷ -ಅರುಣ್‌ ಡಿಸೋಜ, ಫೆಜಾರ್ ವಲಯ ಅಧ್ಯಕ್ಷ - ಸಂತೋಷ್ ಡಿಸೋಜ , ಬಂಟ್ವಾಳ ವಲಯ ಅಧ್ಯಕ್ಷ - ಜೋನ್ ಲಸ್ರಾದೊ, ಬೆಳ್ತಂಗಡಿ ವಲಯ ಅಧ್ಯಕ್ಷ ಲಿಯೋ ರೊಡ್ರಿಗಸ್, ದಕ್ಷಿಣ ವಲಯ ಖಾಜಾಂಜಿ ಫೆಲಿಕ್ಸ್ ಡಿಸೋಜ, ದೆರೆಬೈಲ್ ಘಟಕ ಅಧ್ಯಕ್ಷೆ - ವಿಲ್ಮಾ ಮೊಂತೇರೊ, ಮುಡಿಪು ಘಟಕ ಅಧ್ಯಕ್ಷ ರಜತ್ ವೇಗಸ್ ಹಾಗೂ ನವೀನ್ ಡಿಸೋಜ ಉಪಸ್ಥಿತರಿದ್ದರು.