ಕರಾಚಿ ಬಂದರಿಗೆ ಭಾರತೀಯ ನೌಕಾಪಡೆಯಿಂದ ದಿಟ್ಟ ಹೊಡೆತ

|

ಕರಾಚಿ : (ಮೇ)09 ರಂದು  ಪಾಕಿಸ್ತಾನದ ಕರಾಚಿ ಬಂದರನ್ನು ಭಾರತ ನಾಶ ಮಾಡಿದೆ. 1971ರ ನಂತರ ಕರಾಚಿ ಮೇಲೆ ಭಾರತ ದಾಳಿ ಮಾಡಿದ್ದು, ಐಎನ್‌ಎಸ್‌ ವಿಕ್ರಾಂತ್ 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಬಂದರನ್ನು ಧ್ವಂಸಗೊಳಿಸಿದೆ. ಏರ್‌ ಕ್ರಾಫ್ಟ್‌ಗಳ ಮೂಲಕ ಭಾರತೀಯ ನೌಕಾಪಡೆ ದಾಳಿ ನಡೆಸಿದ್ದು, ಕರಾಚಿ ಬಂದರು ನಾಶವಾಗಿದೆ.ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದ್ದು, ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್ ನಗರಗಳ ಮೇಲೆ ದಾಳಿ ನಡೆಸಿದೆ. ಇತ್ತ ಭಾರತೀಯ ನೌಕಾಪಡೆಯೂ ಸಹ ಐಎನ್‌ಎಸ್‌ ವಿಕ್ರಾಂತ್ ಮೂಲಕ ತನ್ನ ಆರ್ಭಟ ಶುರು ಮಾಡಿದೆ.

ಭಾರತೀಯ ನೌಕಾಪಡೆಯು ಕರಾಚಿ ಬಂದರಿನಲ್ಲಿರುವ ಪ್ರಮುಖ ಮಿಲಿಟರಿ ಮತ್ತು ಆರ್ಥಿಕ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಟೊಮಾಹಾಕ್ ಮತ್ತು ಬ್ರಹ್ಮೋಸ್ ವರ್ಗ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವಾರು ಕ್ಷಿಪಣಿಗಳನ್ನು ಹಾರಿಸಿತು. ಬಂದರಿನ ಹೆಚ್ಚಿನ ಭಾಗಗಳು ನಾಶವಾದವು ಎಂದು ವರದಿಯಾಗಿದೆ.ಕರಾಚಿ ಬಂದರು ಪಾಕಿಸ್ತಾನದ ಆರ್ಥಿಕತೆಯ ಜೀವನಾಡಿಯಾಗಿದ್ದು, ದೇಶದ ಸುಮಾರು 60% ವ್ಯಾಪಾರವನ್ನು ನಿರ್ವಹಿಸುತ್ತದೆ ಮತ್ತು ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಬಂದರಿಗೆ ಹಾನಿಯು ಮಿಲಿಟರಿ ಕಾರ್ಯಾಚರಣೆಗಳನ್ನು ಅಡ್ಡಿಪಡಿಸುವುದಲ್ಲದೆ, ಪಾಕಿಸ್ತಾನದ ಆರ್ಥಿಕತೆ ಮತ್ತು ಸರಕುಗಳನ್ನು ಆಮದು ಮಾಡಿಕೊಳ್ಳುವ ಮತ್ತು ರಫ್ತು ಮಾಡುವ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.