ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಬಗ್ಗಲ್ಲ, ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ

|

ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಬಗ್ಗಲ್ಲ, ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಾಲ ಬಿಚ್ಚಿದರೆ ಉಗ್ರರ ಜತೆಗೆ ಉಗ್ರ ಪೋಷಕ ದೇಶಕ್ಕೂ ಭಾರಿ ಮಾರಿ ಹಬ್ಬ ಕಾದಿದೆ ಎಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ ವಿರುದ್ಧ 'ಆಪರೇಷನ್‌ ಸಿಂದೂರ' ಬಳಿಕ ಮೊದಲ ಬಾರಿಗೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಕಾರ್ಯಾಚರಣೆಯಿಂದ ಪಾಕ್‌ ಅನುಭವಿಸಿರುವ ಮರ್ಮಾಘಾತ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಭಾರತದ ಮುಂದಿನ ನಡೆಯ ಬಗ್ಗೆ ಮಾತುಗಳಲ್ಲಿ ವಿವರಿಸಿದರು. ಭಾರತೀಯ ಸೇನೆಯ ಶೌರ್ಯ ಸಾಹಸ, ಭಾರತೀಯರ ಒಗ್ಗಟ್ಟಿನ ಶಕ್ತಿಯನ್ನು ಕೊಂಡಾಡಿದ ಪ್ರಧಾನಿ, ''ಭಾರತದ ಪರಾಕ್ರಮಿ ಸೇನೆಗೆ, ಸಶಸ್ತ್ರ ಪಡೆಗೆ, ನಮ್ಮ ಗುಪ್ತಚರ ಇಲಾಖೆಗೆ, ನಮ್ಮ ವಿಜ್ಞಾನಿಗಳಿಗೆ ಸಮಸ್ತ ಭಾರತೀಯರ ಪರವಾಗಿ ವಂದಿಸುತ್ತೇನೆ ಎಂದು ಕೊಂಡಾಡಿದರು.