ಕರ್ತವ್ಯದಲ್ಲಿದ್ದಾಗಲೇ ಕಾಫಿನಾಡ ಯೋಧ ಸಾವು

|

ಚಿಕ್ಕಮಗಳೂರು: ಕಾಫಿನಾಡ ಯೋಧರೊಬ್ಬರು ಕರ್ತವ್ಯದಲ್ಲಿದ್ದಾಗಲೇ ರಾಜಸ್ಥಾನದ ಬಿಕಾನೇರ್ ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಕಡೂರಿನ ಯೋಧ ಗಿರೀಶ್ (37) ಮೃತಪಟ್ಟವರಾಗಿದ್ದಾರೆ. ಇವರು ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ವಾಂತಿಯಾಗಿದೆ. ಹೀಗಾಗಿ ವಿಶ್ರಾಂತಿ ಮಾಡಲು ತೆರಳಿದ್ದರು.ನಂತರ ತಮ್ಮ ಮನೆಯವರಿಗೆ ವಿಡಿಯೋ ಕರೆ ಮಾಡಿ ವಿಚಾರ ತಿಳಿಸಿದ್ದು, ತಾನು ಆರೋಗ್ಯವಾಗಿದ್ದೇನೆ, ನಾಳೆ ಆಸ್ಪತ್ರೆಗೆ ಹೋಗ್ತಿನಿ ಅಂತ ಹೇಳಿದ್ದರು ಎನ್ನಲಾಗಿದೆ. ಆದ್ರೆ ನಂತರ ಗಿರೀಶ್ ಸಾವನ್ನಪ್ಪಿದ್ದಾರೆ ಅಂತ ಕುಟುಂಬಸ್ಥರಿಗೆ ಸೇನೆ ಮಾಹಿತಿ ನೀಡಿದ್ದಾರೆ.